ಖಾಲಿಸ್ತಾನಿ ಅಕೌಂಟ್ಸಗಳನ್ನು ಬ್ಯಾನ್ ಮಾಡಿದ ಟ್ವಿಟ್ಟರ.

ಭಾರತದಲ್ಲಿ ಖಲಿಸ್ತಾನ್ ಪರ ವಾದ ಮಾಡುತಿದ್ದ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.ತಡೆಹಿಡಿಯಲಾದ ಖಾತೆಗಳಲ್ಲಿ ಕೆನಡಾದ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಅವರ ಟ್ವಿಟರ್ ಖಾತೆಗಳು ಸೇರಿವೆ.  

ಕೆನಡಾದ ಕವಯಿತ್ರಿ ರೂಪಿ ಕೌರ್, ಸ್ವಯಂಸೇವಾ ಸಂಸ್ಥೆ ಯುನೈಟೆಡ್ ಸಿಖ್ಸ್ ಮತ್ತು ಕೆನಡಾ ಮೂಲದ ಕಾರ್ಯಕರ್ತ ಗುರುದೀಪ್ ಸಿಂಗ್ ಸಹೋಟಾ ಅವರ ಟ್ವಿಟರ್ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ.

 Twitter ಬಳಕೆದಾರರು ಭಾರತದಿಂದ ಈ Twitter ಖಾತೆಗಳನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಅವರು "ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಈ ಖಾತೆಗಳನ್ನು ತಡೆಹಿಡಿಯಲಾಗಿದೆ" ಎಂಬ ಮೆಸೇಜ್ ಡಿಸ್ಪ್ಲೇ ಆಗುತ್ತದೆ.

ಯುಕೆ, ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇತರ ರಾಷ್ಟ್ರಗಳಲ್ಲಿ ನೆಲೆಸಿರುವ ಡಯಾಸ್ಪೊರಾ ಭಾರತೀಯರು ಮತ್ತು ಹಿಂದೂಗಳು ಖಲಿಸ್ತಾನಿ ಅಂಶಗಳ ದಾಳಿಗೆ ಒಳಗಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಜಗ್ಮೀತ್ ಸಿಂಗ್, ಕೆನಡಾದ ಕವಯಿತ್ರಿ ರೂಪಿ ಕೌರ್, ಸ್ವಯಂಸೇವಾ ಸಂಸ್ಥೆ ಯುನೈಟೆಡ್ ಸಿಖ್ಸ್ ಮತ್ತು ಕೆನಡಾ ಮೂಲದ ಕಾರ್ಯಕರ್ತ ಗುರುದೀಪ್ ಸಿಂಗ್ ಸಹೋಟಾ ಮತ್ತು ಇತರರನ್ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.

Latest Articles