ಎಚ್ಚರ! ಎಚ್ಚರ! ಎಚ್ಚರ!: ಸೈಬರ್ ಕ್ರೈಂ ಇಲಾಖೆ ಹೆಸರಿನಲ್ಲಿ ವಂಚನೆ ಕರೆಗಳು, ಮೋಸ ಹೋಗದಿರಿ, ಹುಷಾರ!
ಬೆಳಗಾವಿ: ಜನರಿಗೆ ಸೈಬರ್ ಕ್ರೈಂ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಕಿರುಕುಳದ ಕರೆಗಳು ಹೆಚ್ಚುತ್ತಿವೆ. 8181098499 ನಂಬರ್‌ನಿಂದ ಕರೆ ಮಾಡಿ, ವಂಚಕರು ತಮ್ಮನ್ನು ಹೈದರಾಬಾದ್ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳೆಂದು ಪರಿಚಯಿಸುತ್ತಿದ್ದು, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಡಾರ್ಕ್ ವೆಬ್‌ನಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗಾಗಿ ಬಳಸಲಾಗಿದೆ ಎಂಬ ಆಪಾದನೆ ಮಾಡುತ್ತಿದ್ದಾರೆ.
ಈ ಬೆದರಿಕೆ ಸಂದೇಶದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ಹೇಳಿ, ತಕ್ಷಣವೇ “9” ಒತ್ತಿ ಹೆಚ್ಚಿನ ಮಾಹಿತಿ ಪಡೆಯುವಂತೆ ಒತ್ತಾಯಿಸುತ್ತಾರೆ. ವಂಚಕರು ಈ ಮೂಲಕ ಜನರನ್ನು ಭಯಗೊಳಿಸಿ ಹಣದ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮಹತ್ವದ ಸೂಚನೆಗಳು: ಸೈಬರ್ ಕ್ರೈಂ ಇಲಾಖೆ ಯಾವುದೇ ಕಾನೂನು ನೋಟಿಸ್‌ಗಳನ್ನು ಫೋನ್ ಮೂಲಕ ನೀಡುವುದಿಲ್ಲ.
ಯಾವುದೇ ಅಧಿಕಾರಿಗಳು ನಿಮ್ಮ ವೈಯಕ್ತಿಕ ಅಥವಾ ಹಣಕಾಸು ಮಾಹಿತಿಗಳನ್ನು ಫೋನ್ ಮೂಲಕ ಕೇಳುವುದಿಲ್ಲ.
ಈ ರೀತಿಯ ಕರೆ ಬಂದರೆ, ತಕ್ಷಣವೇ ಕಟ್ ಮಾಡಿರಿ. ಯಾವುದೇ ಸಂಖ್ಯೆಯನ್ನು ಒತ್ತದಿರಿ.
ನೀವು ಏನು ಮಾಡಬಹುದು:
ಇಂತಹ ಕರೆಗಳನ್ನು ಸ್ಥಳೀಯ ಸೈಬರ್ ಕ್ರೈಂ ವಿಭಾಗಕ್ಕೆ ಅಥವಾ ಪೊಲೀಸರಿಗೆ ತಕ್ಷಣವೇ ವರದಿ ಮಾಡಿರಿ.
ನಿಮ್ಮ ವೈಯಕ್ತಿಕ ಅಥವಾ ಹಣಕಾಸು ವಿವರಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಹಂಚಬೇಡಿ.
ಈ ನಂಬರ್ ಅನ್ನು ಬ್ಲಾಕ್ ಮಾಡಿ, ಮತ್ತೆ ಮತ್ತೆ ಕರೆ ಬರುವುದನ್ನು ತಡೆಯಿರಿ.
ಸರ್ಕಾರಿ ಅಧಿಕಾರಿಗಳು ಇಂತಹ ವಂಚನೆಗಳಿಗೆ ಬಲಿಯಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಸುರಕ್ಷತೆಗಾಗಿ, ಸೈಬರ್ ಕ್ರೈಂ ಇಲಾಖೆ ಅಥವಾ ಪೊಲೀಸ್ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಿ.