ಧಾರಾವಾಹಿಗಳ ಗುಂಗಿನಿಂದ ಹೊರಬಾರದ ಗೃಹಲಕ್ಷ್ಮೀಯರು
ಬೆಳಗಾವಿ:ಮನೆಯೊಂದು ಮೂರು ಬಾಗಿಲು ಎಂಬಂತೆ ಟಿವಿ ಒಂದು ಧಾರಾವಾಹಿಗಳು ನೂರಾರು ಎಂವ ಸ್ಥಿತಿಗೆ ಬಂದು ತಲುಪಿದೆ ಇಂದಿನ ಜೀವನ.
ಸಂಜೆ ಐದು ಗಂಟೆಯಾದರೆ ಸಾಕು ಧಾರಾವಾಹಿಗಳ ಸುರಿಮಳೆ ರಾತ್ರಿ ಹನ್ನೊಂದರವರೆಗೆ ಒಂದಾದರೊಂರಂತೆ ಜಿದ್ದಿಗೆ ಬಿದ್ದಿರುವ ರೀತಿಯಲ್ಲಿ ಪ್ರಸಾರವಾಗುತ್ತಿವೆ.
ಪ್ರತಿಯೊಂದು ಧಾರಾವಾಹಿಗಳು ಸಮಾಜಮುಖಿಯಾಗದೆ ತತ್ವ ಸಂದೇಶಗಳನ್ನು ನೀಡದೇ ಗೃಹಲಕ್ಷ್ಮೀಯರನ್ನು ಆಕರ್ಷಣೆಗೆ ಒಳಪಡಿಸುತ್ತಿವೆ. ಚಿತ್ರ ಯಾವುದೇ ಇರಲಿ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡುವಂತಿರಬೇಕು ಆದರೆ ಪ್ರತಿಯೊಂದು ಚಾನೆಲ್ ಹಾಕಿದಾಗ ಮೊದಲು ಕಣ್ಣಿಗೆ ಕಾಣುವದು ಧಾರಾವಾಹಿಗಳೆ ಮನೆಕೆಲಸ ಬಿಟ್ಟು ಎಲ್ಲರೂ ಟಿವಿ ಮುಂದೆ ಕುಳಿತರೆ ಗತಿ ಏನು? ಇತ್ತಿಚೆಗೆ ಧಾರಾವಾಹಿಗಳ ದ್ವೇಷ ಮಾಡುತ್ತಿದ್ದ ಗಂಡಸರೂ ಕೂಡಾ ಅವುಗಳ ದಾಸರಾಗಿರುವದು ವಿಪರ್ಯಾಸ.
ವರದಿ : ರವಿಕಿರಣ್ ಯಾತಗೇರಿ